Wednesday, October 31, 2007

ಕನ್ನಡದ ಭಾವುಟ ಮತ್ತು ಅದರ ಹಿನ್ನಲೆ


ಕರ್ನಾಟಕಕ್ಕೆ ಒಂದು ಭಾವುಟ ಇದೆ। ಅದೇ ತರಹ ಭಾರತದ ಎಲ್ಲ ರಾಜ್ಯಗಳ ಅದರದೇ ಆದ ಭಾವುಟಗಳು ಇದೆಯೇ ? ಕನ್ನಡದ ಭಾವುಟ ಹೇಗೆ ಬಂತು ಮತ್ತು ಅದರ ಬಣ್ಣಗಳ ವೈಶಿಷ್ಟ್ಯತೆ ಏನು? ಈ ಪ್ರಶ್ನೆ ಎಷ್ಟು ಜನಕ್ಕೆ ಬಂದಿದೆ , ಎಷ್ಟು ಜನ ಇದರ ಬಗ್ಗೆ ಯೋಚನೆ ಮಾಡಿದ್ದಾರೆ ಹೇಳಿ। ನಾವುಗಳು ವರ್ಷಕ್ಕೆ ಒಮ್ಮೆ ಕನ್ನಡದ ಭಾವುಟ ಹಾರಿಸಿ, ನಮ್ಮ ಸ್ನೇಹಿತರಿಗೆ ರಾಜ್ಯೋತ್ಸವದ ಶುಭಾಶಯ ಕೋರುವ ಇ-ಅನ್ಚಿಕೆ ಗಳನ್ನು ಕಳುಹಿಸಿದರೆ ಸಾಕೆ । ನಮ್ಮ ರಾಜ್ಯದ ಬಗ್ಗೆ ಅದರ ಭಾಷೆ ಸಂಸ್ಕೃತಿ , ಜನ ಇದರ ಬಗ್ಗೆ ತಿಳಿದು ಕೊಲ್ಲಿ ಅಂಥ ಎಲ್ಲಾರು ಹೇಳ್ತಾರೆ , ನಿಜ ಅದರ ಬಗ್ಗೆನು ತಿಳಿದಿರಬೇಕು ಆದರೆ ಇಂಥಹ ಸಣ್ಣ ಸಣ್ಣ ವಿಷಯಗಳೂ ತಿಲಿದುಕೊಲ್ಲೋದು ಮುಖ್ಯಾನೆ ।ಕರ್ನಾಟಕ ರಾಜ್ಯ ಏಕೀಕರಣ ಆಗಿದ್ದು ನವೆಂಬರ್ ೧ ೧೯೫೬ ನಲ್ಲಿ, ಆದರೆ ಅದರ ಹೆಸರು ಮೈಸೂರು ಎಂದೆ ಇತ್ತು। ೧೯೭೩ ರಲ್ಲಿ ಮೈಸೂರು ಇಂದ ಕರ್ನಾಟಕ ಎಂದು ನಾಮಕರಣ ಮಾಡಿದರು. ೧೯೫೬ ರಲ್ಲಿ "ಕನ್ನಡ ಪಕ್ಷ" ಅಂಥ ಒಂದು ರಾಜಕೀಯ ಪಕ್ಷ ಮ.ರಾಮಮೂರ್ತಿ ಅವರು ಶುರು ಮಾಡಿದ್ದರು. ಆ ಪಕ್ಷಕ್ಕೆ ಒಂದು ಭಾವುಟ ಇತ್ತು. ಆ ಪಕ್ಷವು ಬಹು ದಿನ ಉಳಿಯಲಿಲ್ಲ, ಆದರೆ ಅಂದಿನಿಂದ ಕನ್ನಡ॥ ಕರ್ನಾಟಕ ಎಂದಾಗಲೆಲ್ಲ ಈ ಭಾವುಟವನ್ನು ಉಪಿಯೋಗಿಸಲು ಶುರು ಮಾಡಿದರು . ಹೀಗೆ ಮುಂದೆ ಅಧಿಕೃತವಾಗಿ ಇದನ್ನೇ ಕರ್ನಾಟಕದ ಭಾವುಟ ವಾಗಿ ಸ್ವೀಕರಿಸಿದರು.ಇನ್ನು ನಮ್ಮ ಭಾವುಟದಲ್ಲಿಇರೋ ಬಣ್ಣಗಳ ವೈಶಿಷ್ಟ್ಯತೆ ಏನು ಅಂತೀರ. ಭಾರತದ ಸಂಸ್ಕೃತಿಯಲ್ಲಿ ಮುತ್ತೈದೆತನದ ಒಂದು ಮುಖ್ಯ ಅಂಶವೆಂದರೆ ಅರಿಶಿನ ಕುಂಕುಮ. ಇದೆ ನಮ್ಮ ಭಾವುಟ ದಲ್ಲಿ ಇರೋ ಬಣ್ಣಗಳ ವೈಶಿಷ್ಟ್ಯವೂ ಕೂಡ