ಆ ದಿನ ನೋಡಿದೆ ನಿನ್ನ ಮೊದಲ ಸಲ
ಅಂದು ಕೊಂಡೆ ಇದೆ ನನ್ನ ಸಂಗಾತಿಯ ಹುಡುಕಾಟ ಕೊನೆಯ ಸಲ
ಆ ಮುಖದಲ್ಲಿ ಇತ್ತು ಒಂದು ಸುಂದರ ಮುಗುಳು ನಗೆ
ನನಗಾಯಿತು ಆಸೆ ಬಗೆ ಬಗೆ
ನಿನ್ನ ನೋಟದಲ್ಲಿ ಇತ್ತು ಏನೋ ಒಂಥರಾ ಕಾಂತಿ
ಮನಸಿನಲ್ಲಿ ಹುಟ್ಟಿತು ಪ್ರೇಮದ ಭ್ರಾಂತಿ
ನಿನ್ನ ಜೊತೆ ಮಾತನಾಡಿ ಅನಿಸಿತು ಇವಳೇ ನನ್ನ ಸಂಗಾತಿ ಎಂದು
ಆದರೆ ಅವಳ ಉತ್ತರವೆನೆಂದು ಗೊತಿರಲಿಲ್ಲ ನನಗಂದು
ಎರಡು ದಿನ ಬಿಟ್ಟು ನನಗೆ ತಿಳಿಸಿದಳು ಅ ಪ್ರಿಯಾಳ ಪ್ರಿಯತಮ ನಾನೆಂದು
ಸಂತಸದ ಉಗಿ ಬಂಡಿ ಹತ್ತಿದೆ ನಾನು ಆ ದಿನದಂದು
ಇವತ್ತಿಗೆ ಆಯಿತು ಒಂದು ವರ್ಷ ನಿನ್ನ ನೋಡಿ
ಹಸಿಯಾಗಿದೆ ಇನ್ನು ಆ ನೆನಪು ನೀ ನನಗೆ ಮಾಡಿದ ಮೋಡಿ
ಸಂತೋಷವೆಂಬ ಸಾಗರದಲ್ಲಿ ನನ್ನ ಇಟ್ಟಿರುವೆ
ನಿನ್ನ ಜೀವಕ್ಕಿಂತ ಹೆಚ್ಚು ನನ್ನ ಪ್ರೀತಿಸುತ್ತಿರುವೆ
ನಿನ್ನ ಸುಖವಾಗಿ ಇಡಲು ಮಾದುತಿರುವೇನು ಒಂದು ಪ್ರಯತ್ನ
ನಿನಗಾಗಿ ಮುದಿಪಾಗಿದುವೆ ನನ್ನ ಜೀವ ಹಾಗು ಆತ್ಮ
ಹೀಗೆ ಸುಖ ಶಾಂತಿ ನೆಮ್ಮದಿ ಇಂದ ಇರೋಣ ಇನ್ನು ನೂರು ಕಾಲ
ನೀ ನನ್ನ ಪ್ರೀತಿಸು ನಾನ್ ನಿನ್ನ ಪ್ರೀತಿಸುವೆ ಸದಾ ಕಾಲ